crime

ನಾಗರೀಕರೇ ನೆನಪಿಡಿ:-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಪ್ತಾ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ.

Sunday, March 18, 2018

SHIVAMOGGA DIST CRIMES ON17.3.2018


¢£ÁAPÀ: 17/03/2018

ºÉƸÀ£ÀUÀgÀ ¥Éưøï oÁuÉ: C¥ÀWÁvÀzÀ°è ¸ÁªÀÅ: ¥ÀæPÀgÀt
                    ಈ ದಿವಸ ಬೆಳಿಗ್ಗೆ  11  ಗಂಟೆಗೆ ಪಿರ್ಯಾದುದಾರರಾದ ಶ್ರೀ ದುಗ್ಗಪ್ಪ ಬಿನ್ ನಾಗಪ್ಪ 52 ವರ್ಷ ಮಡಿವಾಳರ ಜಾತಿ ವ್ಯವಸಾಯ ಕೆಲಸ ವಾಸ ಮಾವಿನಕಟ್ಟೆ ಗ್ರಾಮ ಹೊಸನಗರ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ.ನನಗೆ ಒಟ್ಟು 5 ಜನ ಮಕ್ಕಳಾಗಿದ್ದು,ಸವಿತಾ,ರೇಣುಕಾ,ಗೀತಾ,ರಮ್ಯ ,ರವರುಗಳನ್ನು ಮದುವೆ ಮಾಡಿಕೊಟ್ಟಿದ್ದು,ಸವಿತಾ ಈಗ 10 ವರ್ಷಗಳ ಹಿಂದೆ ಮೃತಪಟ್ಟಿರುತ್ತಾಳೆ.ನನ್ನ ಮಗ ನಾಗರಾಜ ಹೊಸನಗರದ ನಾಗರಾಜ್ ರವರ ಬಳಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ.ಪ್ರತಿ ದಿನ ಅವನ ಬೈಕಿನಲ್ಲೆ ಹೊಸನಗರಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದ.ದಿನಾಂಕ 15-03-18 ರಂದು ನನ್ನ ಮಗ ನಾಗರಾಜನು ಕೆಲಸಕ್ಕೆ ಹೋಗಿದ್ದು ,ರಾತ್ರಿ ಕೆಲಸ ಮುಗಿಸಿಕೊಂಡು ಅವನು ನಮ್ಮ ಪಕ್ಕದ ಊರಾದ ಸಾವಂತೂರಿನ ಕಾರ್ತಿಕ್ ರವರುಗಳು ವಾಪಾಸ್ಸು ಮನೆಗೆ ಬರುತ್ತಿರುವಾಗ ಮಾವಿನಕೊಪ್ಪ ವೃತ್ತದಿಂದ ಸ್ವಲ್ಪ ಹಿಂದೆ ರಾತ್ರಿ 9.15 ಕ್ಕೆ ರಾಮದೇವ್ ಸ್ಟೀಲ್ ಅಂಗಡಿ ಪಕ್ಕ ನಿಂತಿದ್ದ KA-17 A-5138 ಲಾರಿಯ ಚಾಲಕನು ಒಮ್ಮೆಲೆ ಲಾರಿಯನ್ನು ಯಾವುದೇ ಸಿಗ್ನಲ್ ನೀಡದೇ ,ಅಜಾಗರೂಕತೆಯಿಂದ ,ವೇಗವಾಗಿ ರಿವರ್ಸ್ ನಲ್ಲಿ ಚಾಲನೆ ಮಾಡಿ, ನನ್ನ ಮಗ ನಾಗರಾಜನು ರಸ್ತೆಯ ಎಡಬದಿಯಲ್ಲಿ  ಚಾಲನೆ ಮಾಡಿಕೊಂಡು ಬರುತ್ತಿದ್ದ KA-15 V-8599 ಡಿಸ್ಕವರ್ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ,ನಾಗರಾಜನು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು,ಅಪಘಾತವನ್ನು ಪ್ರತ್ಯಕ್ಷವಾಗಿ ಕಂಡ ಕಾರ್ತಿಕ್,ಉಮೇಶ್ ಮತ್ತು ಮಹೇಂದ್ರ ರವರುಗಳು ನಾಗರಾಜನನ್ನು ಎತ್ತಿ ಉಪಚರಿಸಿದ್ದು,ನಾಗರಾಜನಿಗೆ ತಲೆಗೆ ,ಬಲಕೈಗೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದರಿಂದ ಅವನನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ವಿಷಯ ತಿಳಿಯಿತು.ನಾನು ಕೂಡ ಆಸ್ಪತ್ರೆಗೆ ಹೋಗಿದ್ದು,ನಂತರ ಮಣಿಪಾಲಿನಿಂದ ನನ್ನ ಮಗನನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು,ಅಪಘಾತವನ್ನು ಪ್ರತ್ಯಕ್ಷವಾಗಿ ಕಂಡ ಕಾರ್ತಿಕ್ ನು ಅಪಘಾತಪಡಿಸಿದ ಲಾರಿ ಚಾಲಕ ವಿದ್ಯಾರ್ಥಿ ಮೇಲೆ ತಡವಾಗಿ ನಿನ್ನೆ ದಿನ ಹೊಸನಗರ ಪೊಲೀಸರಿಗೆ ದೂರು ನೀಡಿರುವ ವಿಚಾರ ನನಗೆ ತಿಳಿದಿರುತ್ತದೆ.
           
         ಮಂಗಳೂರು ವೆನ್ ಲಾಕ್  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈಧ್ಯರು,ತಲೆಗೆ ಬಲವಾದ ಹೊಡೆತ ಬಿದ್ದಿದ್ದು,ಗುಣಮುಖವಾಗುವುದು ಕಷ್ಟ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ತಿಳಿಸಿದ್ದರಿಂದ ನಿನ್ನೆ ದಿನ ರಾತ್ರಿ 9 ಗಂಟೆಗೆ ನಾನು ನನ್ನ ಮಗನನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ವಾಪಾಸ್ಸು ಮನೆಗೆ ಕರೆದುಕೊಂಡು ಬಂದಿದ್ದು, ದಿನ ದಿನಾಂಕ 17-3-18 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮಾವಿನಕಟ್ಟೆಯ ನಮ್ಮ ಮನೆಗೆ ಮಗನನ್ನು ಕರೆದುಕೊಂಡು ಬಂದಿದ್ದು.ಬೆಳಗಿನ ಜಾವ ಸುಮಾರು 3 ಗಂಟೆಗೆ ನನ್ನ ಮಗ ನಾಗರಾಜನು ನಮ್ಮ ಮನೆಯಲ್ಲಿ ಮೃತಪಟ್ಟಿರುತ್ತಾನೆ.ದಿನಾಂಕ 15-03-18 ರಂದು ರಾತ್ರಿ 9.15 ಕ್ಕೆ ಮಾವಿನಕೊಪ್ಪ ವೃತ್ತದಿಂದ ಸ್ವಲ್ಪ ಹಿಂದೆ ಹೊಸನಗರ ಸಾಗರ ಟಾರ್ ರಸ್ತೆಯ ಮೇಲೆ ,KA-17 A-5138 ಲಾರಿಯ ಚಾಲಕ ವಿದ್ಯಾರ್ಥಿಯು ಯಾವುದೇ ಸಿಗ್ನಲ್ ನೀಡದೇ ಅಜಾಗರೂಕತೆಯಿಂದ,ವೇಗವಾಗಿ ಲಾರಿಯನ್ನು ರಿವರ್ಸ್ ನಲ್ಲಿ ಚಾಲನೆ ಮಾಡಿ ,ಮನೆಗೆ ಬರುತ್ತಿದ್ದ ನನ್ನ ಮಗ ನಾಗರಾಜನ KA-15 V- 8599 ಡಿಸ್ಕವರ್ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಮಗ ನಾಗರಾಜನಿಗೆ ತಲೆಗೆ,ಬಲಕೈಗೆ ಪೆಟ್ಟುಬಿದ್ದು ರಕ್ತಗಾಯವಾಗಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.ಆದ್ದರಿಂದ ಅಪಘಾತಪಡಿಸಿ ನನ್ನ ಮಗನ ಸಾವಿಗೆ ಕಾರಣನಾದ ಲಾರಿ ಚಾಲಕ ವಿದ್ಯಾರ್ಥಿಯ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಂಡು ನನ್ನ ಮಗನ ಶವದ ಮೇಲೆ ಕ್ರಮ ಜರುಗಿಸಿ ಮುಂದಿನ ನಮ್ಮ ಮತಪದ್ದತಿಯಂತೆ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿಕೊಳ್ಳುತ್ತೇನೆ ಎಂದಿದ್ದ  ದೂರಿನ ಮೇರೆಗೆ ಈ ಕೇಸಿನಲ್ಲಿ ಹೆಚ್ಚುವರಿಯಾಗಿ ಕಲಂ 304 () ಐಪಿಸಿಯನ್ನು ಅಳವಡಿಸಿಕೊಂಡು ತನಿಖೆಯನ್ನು ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿಯನ್ನು ನೀಡಲು ಕೋರಿ ವರದಿಯನ್ನು ನಿವೇದಿಸಿಕೊಂಡಿರುತ್ತದೆ.
 ಈ ಪ್ರಕರಣವು ಘೋರ ಅಪರಾವಾಗಿದ್ದರಿಂದ ತುರ್ತು ವರದಿಯನ್ನು ತಯಾರಿಸಿ ಮಾನ್ಯರಿಗೆ ನಿವೇದಿಸಿಕೊಂಡಿರುತ್ತೆ
ಶಿರಾಳಕೊಪ್ಪ ಓ.ಸಿ ಮಟ್ಕಾ ಜೂಜಾಟ ¥ÀæPÀgÀt

ದಿನ ದಿನಾಂಕ 17-03-2018 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿದ್ದಾಗ ಶಿರಾಳಕೊಪ್ಪ ಪಟ್ಟಣದ ಹಿರೆಕೇರೂರು ರಸ್ತೆಯ ಎ.ಪಿ.ಎಂ.ಸಿ. ಪ್ರಾಂಗಣ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಓ.ಸಿ ಮಟ್ಕಾ ಜೂಜಾಟ ಆಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ, ಈ ಬಗ್ಗೆ ದಾಳಿ ಮಾಡಿ ಪ್ರ..ವರದಿ ದಾಖಲಿಸಲು ಮಾನ್ಯ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಶಿಕಾರಿಪುರರವರಿಂದ ಅನುಮತಿ ಕೋರಿದ್ದು, ಮಾನ್ಯ ನ್ಯಾಯಾಲಯವು ದಾಳಿ ಮಾಡಲು ನೀಡಿದ ಆದೇಶದ ಪ್ರತಿಯನ್ನು ನ್ಯಾಯಾಲಯ ಕರ್ತವ್ಯದ ಸಿಪಿಸಿ 1640 ರವರು ಬೆಳಿಗ್ಗೆ 11-15 ಗಂಟೆಗೆ ಹಾಜರ್ಪಡಿಸಿದ ಮೇರೆಗೆ, ಠಾಣಾ ಗುಪ್ತ ಮಾಹಿತಿ ಸಿಪಿಸಿ 2061 ರವರ ಮುಖಾಂತರ ಪಂಚರಾದ ಶ್ರೀ ಲಿಂಗರಾಜ ಬಿನ್ ದಿ|| ವಾಸುದೇವ, 43 ವರ್ಷ ವಾಸ ಬೆಲವಂತನಕೊಪ್ಪ, ಶಿಕಾರಿಪುರ ತಾಲ್ಲೂಕು ಮತ್ತು ಶ್ರೀ ಶ್ರೀನಿವಾಸ ಬಿನ್ ದಿ|| ರಾಮಪ್ಪ, 39 ವರ್ಷ ವಾಸ ದೇವರಾಜ ಅರಸು ಬಡಾವಣೆ, 03ನೇ ತಿರುವು, ಶಿರಾಳಕೊಪ್ಪ ಟೌನ್ ಇವರುಗಳನ್ನು ಬೆಳಿಗ್ಗೆ 11-20 ಗಂಟೆಗೆ ಠಾಣೆಗೆ ಬರಮಾಡಿಕೊಂಡು ನಾನು ಪಂಚರ ಜೊತೆ ಸಿಬ್ಬಂದಿಗಳಾದ ಸಿ.ಹೆಚ್.ಸಿ 410, ಸಿಪಿಸಿ 1067, ಪ್ರಭುಗೌಡ, ಸಿಪಿಸಿ  2061, ಟೀಕಪ್ಪ ರವರೊಂದಿಗೆ ಠಾಣೆಯಿಂದ ಹೊರಟು ಶಿರಾಳಕೊಪ್ಪ ಟೌನ್ ಹಿರೆಕೇರೂರು ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 11-25 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಪಂಚರ ಜೊತೆಯಲ್ಲಿ ನಾನು ಮತ್ತು ಸಿಬ್ಬಂದಿಯವರು ಐದಾರು ನಿಮಿಷ ಗುಪ್ತವಾಗಿ ಗಮನಿಸಲಾಗಿ, ಅಲ್ಲಿನ ಎ.ಪಿ.ಎಂ.ಸಿ. ಪ್ರಾಂಗಣದ ಮುಂಭಾಗ ಹಿರೆಕೇರೂರು ಮುಖ್ಯ ರಸ್ತೆಯಿಂದ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಎರಡು ಜನ ಆಸಾಮಿಗಳು ಸೇರಿಕೊಂಡು ಸಾರ್ವಜನಿಕರನ್ನು ಕೂಗಿ ಕರೆದು, ಇದು ಅದೃಷ್ಠದ ಓ.ಸಿ ಮಟ್ಕಾ ಜೂಜಾಟ ನಿಮ್ಮ ನಂಬರ್ ಬಂದರೆ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ. ಬನ್ನಿ ಹಣ ಕಟ್ಟಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ ಅಂತಾ ಹೇಳುತ್ತಾ ಒಬ್ಬ ಸಾಮಿಯು ಜನರಿಂದ ಹಣ ವಸೂಲಿ ಮಾಡಿ ಪಡೆಯುತ್ತಿದ್ದು, ಇನ್ನೊಬ್ಬ ವ್ಯಕ್ತಿಯು ಜನರಿಗೆ ನಂಬರ್ ಬರೆದುಕೊಡುತ್ತಿರುವುದು ಕಂಡು ಬಂದ ಮೇರೆಗೆ ಕಾನೂನು ಬಾಹಿರ ಅಕ್ರಮ ಮಟ್ಕಾ ಜೂಜಾಟ ನಡೆಸುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಬೆಳಿಗ್ಗೆ 11-30 ಗಂಟೆಗೆ ದಾಳಿ ಮಾಡಿದ್ದು, ಆ ಸಮಯದಲ್ಲಿ ಸಾರ್ವಜನಿಕರು ಓಡಿ ಹೋಗಿದ್ದು, ಜೂಜಾಟ ನಡೆಸುತ್ತಿದ್ದ ಎರಡು ಜನ ಆಸಾಮಿಗಳು ಸೆರೆ ಸಿಕ್ಕಿದ್ದು, ಚೀಟಿ ಬರೆದುಕೊಡುತ್ತಿದ್ದವನ ಹೆಸರು ವಿಳಾಸ ಕೇಳಲಾಗಿ, ವೀರಯ್ಯ. ಬಿ.ಕೆ. ಬಿನ್ ದಿ|| ಬಸವನಗೌಡ, 50 ವರ್ಷ, ಜಂಗಮರ ಜನಾಂಗ, ಕಿರಾಣಿ ಅಂಗಡಿ ವ್ಯಾಪಾರ ವಾಸ ಬೆಲವಂತನಕೊಪ್ಪ, 03ನೇ ತಿರುವು, ಶಿಕಾರಿಪುರ ತಾಲ್ಲೂಕು ಅಂತ ತಿಳಿಸಿದನು. ನಂತರ ಹಣ ಕಟ್ಟಿಸಿಕೊಳ್ಳುತ್ತಿದ್ದವನ ಹೆಸರು ವಿಳಾಸ ಕೇಳಲಾಗಿ ಕರಿಬಸಪ್ಪ ಬಿನ್ ರುದ್ರಪ್ಪ, 42 ವರ್ಷ, ಲಿಂಗಾಯ್ತರ ಜನಾಂಗ, ಕ್ಯಾಂಟೀನ್ ವ್ಯಾಪಾರ ವಾಸ ಪಂಪೌಸ್ ಬಡಾವಣೆ, 08ನೇ ತಿರುವು, ಶಿರಾಳಕೊಪ್ಪ ಟೌನ್, ಶಿಕಾರಿಪುರ ತಾಲ್ಲೂಕು ಅಂತಲೂ ಮತ್ತು ಜೂಜಾಟದಲ್ಲಿ ಪಣಕ್ಕಾಗಿ ಕಟ್ಟಿದ ಹಣ ಮತ್ತು ನಂಬರನ್ನು ಬರೆದ ಚೀಟಿಯನ್ನು ನಾನೇ ನನ್ನ ಬಳಿ ಇಟ್ಟುಕೊಳ್ಳುತ್ತಿದ್ದೆ ಎಂದು ತಿಳಿಸಿದನು. ನಂತರ ಪಂಚರ ಸಮಕ್ಷಮ ಕರಿಬಸಪ್ಪನ ಅಂಗಶೋದನೆ ಮಾಡಲಾಗಿ ಆತನ ಬಳಿ 1) ಓಟ್ಟು 2120/- ರೂ. ನಗದು ಹಣ ಸಿಕ್ಕಿತು. ವೀರಯ್ಯ ಈತನ ಅಂಗಶೋದನೆ ಮಾಡಲಾಗಿ ಆತನ ಬಳಿ ಒಂದು ಓಸಿ. ನಂಬರ್ ಬರೆದ ಚೀಟ ಹಾಗೂ ಒಂದು ಬಾಲ್ ಪೆನ್ ದೊರೆತಿದ್ದು, ಸದರಿ ವ್ಯಕ್ತಿಗಳಿಗೆ ಮಟ್ಕಾ ಜೂಜಾಟದ ಬಗ್ಗೆ ಪರವಾನಿಗೆ ಏನಾದರು ಇದೆಯಾ ಅಂತಾ ಕೇಳಿದ್ದಕ್ಕೆ, ಏನು ಇಲ್ಲ ಎಂದು ತಿಳಿಸಿದ್ದು, ಸದರಿ ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 11-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯವರೆಗೆ ಪಂಚನಾಮೆ ಮುಖೇನ ಮುಂದಿನ ತನಿಖೆಯ ಬಗ್ಗೆ ಅಮಾನತ್ತು ಪಡಿಸಿಕೊಳ್ಳಲಾಯ್ತು. ನಂತರ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ವಾಪಸ್ಸು ಠಾಣೆಗೆ ಬಂದು ಸ್ವ-ದೂರನ್ನು ತಯಾರಿಸಿ ಮದ್ಯಹ್ನ 01-00 ಗಂಟೆಗೆ ಠಾಣಾ ಅಪರಾಧ ಸಂಖ್ಯೆ: 100/2018 ಕಲಂ 78(3) ಕೆ.ಪಿ. ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.


ºÉƸÀªÀÄ£É ¥Éưøï oÁuÉ  ಇಸ್ಪೀಟು ಜೂಜಾಟ ¥ÀæPÀgÀt


ದಿನಾಂಕ: 17/03/2018 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ ಪಿರ್ಯಾದುದಾರರು ಠಾಣೆಯಲ್ಲಿದ್ದಾಗ  ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಗುಡಿ ಗ್ರಾಮದ ಶ್ರೀ ರಣದುರ್ಗಮ್ಮ ದೇವಿ ದೇವಸ್ಥಾನದ ಬಳಿ ಇರುವ ಖಾಲಿ ಜಾಗದಲ್ಲಿ ಕೆಲವರು ಗುಂಪುಕಟ್ಟಿಕೊಂಡು ಇಸ್ಪೀಟು ಜೂಜಾಟದಲ್ಲಿ ತೊಡಗಿರುವುದಾಗಿ ಭಾತ್ಮಿದಾರರಿಂದ ದೂರಾವಾಣಿ ಮುಖಾಂತರ ಖಚಿತ ಮಾಹಿತಿ ಬಂದಿದ್ದು ಸಿಬ್ಬಂದಿಯಾದ ಸಿಪಿಸಿ2066 ಕುಮಾರ, ಸಿಪಿಸಿ 1371ಮೌನೇಶ ರವರನ್ನು ಕರೆದುಕೊಂಡು ಠಾಣೆಯಿಂದ ಇಲಾಖಾ ವಾಹನದಲ್ಲಿ ಹೊರಟು ಮದ್ಯಾಹ್ನ 5.30 ಪಿಎಂ ಗೆ ಬಸವನಗುಡಿ ಗ್ರಾಮಕ್ಕೆ ಹೋಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ಪಂಚರಾದ 1) ಶ್ರೀ ಉಮೇಶ ಬಿನ್ ನಂಜುಂಡಪ್ಪ 44 ವರ್ಷ, ಒಕ್ಕಲಿಗ ಜನಾಂಗ, ಜಿರಾಯ್ತಿ ಕೆಲಸ, ವಾಸ ಕೆ.ಹೆಚ್ ನಗರ ಭದ್ರಾವತಿ 2) ಶ್ರೀ ಸ್ವಾಮಿಗೌಡ ತಂದೆ ಚಿಕ್ಕಕಾಳೇಗೌಡ, 33 ವರ್ಷ, ಒಕ್ಕಲಿಗ ಜನಾಂಗ, ವ್ಯವಸಾಯ ಕೆಲಸ, ವಾಸ ಕಾಚಗೊಂಡನಹಳ್ಳೀ ಗ್ರಾಮ ಭದ್ರಾವತಿ ರವರನ್ನು ಬರಮಾಡಿಕೊಂಡು ಅಸಾಮಿಗಳು ಜೂಜಾಟದಲ್ಲಿ ತೋಡಗಿರುವುದನ್ನು ಖಚಿತಪಡಿಸಿಕೊಂಡು 5.45 ಪಿಎಂ ಗೆ ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದವರನ್ನು ಹಿಡಿದುಕೊಂಡಿದ್ದು ಪಂಚರ ಸಮಕ್ಷಮ ಹಿಡಿದುಕೊಂಡು ಹೆಸರು ವಿಳಾಸ ಕೇಳಿದ್ದು ಸದರಿಯವರು ಜೂಜಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ ಬಿಳಿ ಬಣ್ಣದ ಚೀಲಾ ಹಾಕಲಾಗಿದ್ದು ಅದರ ಮೇಲೆ ಇಸ್ಪೀಟು ಕಾರ್ಡ್ ಗಳು ಹಾಗು ನಗದು ಹಣ ಚದುರಿ ಬಿದ್ದಿದ್ದು ವಿಚಾರಿಸಲಾಗಿ ಸ್ಥಳದಲ್ಲಿ ಇಸ್ಪೀಟು ಜೂಜಾಡುತ್ತಿದ್ದುದ್ದಾಗಿ ಹಣವು ಜೂಜಾಡಲು ಬಳಸಿದ್ದಾಗಿ ತಿಳಿಸಿದ್ದು ಪರಿಶೀಲಿಸಲಾಗಿ ಒಟ್ಟು 52 ಇಸ್ಪೀಟ್ ಎಲೆಗಳು ಇದ್ದು ಹಣವನ್ನು ಪರಿಶೀಲಿಸಲಾಗಿ 2350/- ರೂ ಮುಖಬೆಲೆಯ100 ರೂ ಮುಖಬೆಲೆಯ 22 ನೋಟುಗಳು, 50 ರೂ ಮುಖಬೆಲೆಯ 3 ನೋಟುಗಳು ದೊರೆತಿದ್ದು ಒಟ್ಟು 2350/- ರೂ ನಗದು ಹಣವಿರುತ್ತದೆ. ಸ್ಥಳದಲ್ಲಿ ದೊರೆತ ನಗದು ಹಣ ಹಾಗು ಇಸ್ಪೀಟು ಕಾರ್ಡು ಜೂಜಾಡಲು ಬಳಸಿದ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ 5-45 ಪಿಎಂ ಯಿಂದ 6-45 ಪಿ, ಎಂ  ವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ, ಆರೋಪಿತರನ್ನು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಕರೆತಂದು ಪ್ರಕರಣ ದಾಖಲಿಸುವಂತೆ ನೀಡಿದ ವರದಿ ಮೇರೆಗೆ ಪ್ರ ವ ವರದಿ ಸಾರಾಂಶ